ದಿನಾಂಕ 05.09.2024ರಂದು ಮೈಸೂರು ನಗರದ ಮಹಾರಾಜ ಶಿಕ್ಷಣ ಸಂಸ್ಥೆಯ ಎಂಐಟಿ ಪದವಿ ಕಾಲೇಜಿನ ಕನ್ನಡ ವಿಭಾಗವು ಆಧುನಿಕ ಶಿಕ್ಷಣಕ್ಕೆ ಒತ್ತು ನೀಡುವ ದಿಶೆಯಲ್ಲಿ “ಕನ್ನಡ ತಂತ್ರಜ್ಞಾನ, ಹೊಸ ಸಾಧ್ಯತೆ ಮತ್ತು ಸವಾಲುಗಳು” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಿತ್ತು.

ಈ ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಡಿ. ಪುರುಷೋತ್ತಮ್ ಅವರು ಆಧುನಿಕ ಯುಗಮಾನದಲ್ಲಿ ಶಿಕ್ಷಣ ಎಂಬುದು ಶುಕಪಾಠವಾಗಿರದೆ, ನೈಪುಣ್ಯತೆ ಹಾಗೂ ಸೃಜನಶೀಲ ಜ್ಞಾನದ ಮೂಲಕ ವಿದ್ಯಾರ್ಥಿಗಳು ವಿಕಸಿತರಾಗಿ ಹೆಚ್ಚು ಜ್ಞಾನವನ್ನು ಗಳಿಸುವಲ್ಲಿ ತರುಣ ತರುಣಿಯರು ವಿಫಲರಾಗಿದ್ದು, ಅವರಿಗೆ ಭಾಷಾಜ್ಞಾನದ ಕೊರತೆ ಕಾಡುತ್ತಿದೆ. ಆದಕಾರಣ ವಿದ್ಯಾರ್ಥಿಗಳಲ್ಲಿ ಆಧುನಿಕ ತಂತ್ರಜ್ಞಾನಗಳು ಅವ್ಯಾಹತವಾಗಿ ಆವರಿಸಿಕೊಂಡಿದ್ದು, ಆ ಕೊರತೆಯನ್ನು ನೀಗಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ಹಿಂದೆ ಬಿದ್ದಿದೆ. ಈ ಹಿನ್ನಲೆಯಲ್ಲಿ ತರುಣ ತರುಣಿಯರನ್ನು ಜಾಗೃತರನ್ನಾಗಿಸಲು ಮಾತೃಭಾಷೆಗಳು ಸಹಕಾರಿಯಾಗಿವೆ. ಇವುಗಳ ಮೂಲಕ ಸ್ಪರ್ಧಾ ಜಗತ್ತಿನಲ್ಲಿ ಕಲಿಕೆಗೆ ಎದುರಾಗುತ್ತಿರುವ ಸವಾಲುಗಳನ್ನು ಸ್ವೀಕಾರ ಮಾಡಿ, ತಮ್ಮ ಭವಿಷ್ಯದ ಹೊಸ ಸಾಧ್ಯತೆಗಳನ್ನು ಶಿಕ್ಷಣದ ಮೂಲಕ ಕಂಡುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಎಂಐಟಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜು ಬಿ. ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಕುರಿತು ‘ಇಂತಹ ಕಾರ್ಯಕ್ರಮಗಳಿಂದ ಸಾಕಷ್ಟು ಜ್ಞಾನವನ್ನು ಗಳಿಸಬೇಕೆಂದು ಹಾಗೂ ವೈಜ್ಞಾನಿಕ ಜ್ಞಾನವನ್ನು ಪಡೆದು ಸ್ಪರ್ಧಾ ಜಗತ್ತಿನಲ್ಲಿ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಎಂಐಟಿ ಪದವಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಶಿವರಾಜ್ ಜಿ.ಡಿ. ಮುಖ್ಯ ಅತಿಥಿಗಳನ್ನು ಸಭೆಗೆ ಸ್ವಾಗತಿಸಿ ಪರಿಚಯಿಸಿದರು. ಎಂಐಟಿ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಉಷಾರಾಣಿ ಜಿ. ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಎಲ್. ಕಿರಣ್ ಕುಮಾರ್ ಅವರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರನ್ನೂ ಎಂಐಟಿ ಪದವಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮಹದೇವ ಕೆ.ಎಂ. ಅವರು ವಂದಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

Both students and staff enjoyed the visit, finding it a valuable and memorable experience. It was a great way for students to connect their classroom learning with practical knowledge.

Overall, this visit was a successful and informative field trip for everyone involved.