ಕಲೆಗೆ ಗೌರವ: ಜಾನಪದ ಸೇವಾ ಮತ್ತು ಯುವ ಕಲಾರತ್ನರ ಸನ್ಮಾನ
ಎಂಐಟಿ ಪದವಿ ಕಾಲೇಜು, ಕನ್ನಡ ವಿಭಾಗ, ಮೈಸೂರು ಹಾಗೂ ಕರ್ನಾಟಕ ರಾಜ್ಯ ವೈಚಾರಿಕ ಚಿಂತಕರ ವೇದಿಕೆಯ ಸಂಯುಕ್ತಾಕ್ಷರದಲ್ಲಿ ದಿನಾಂಕ 20.03.2025ರ ಗುರುವಾರ “ರಾಜ್ಯ ಜಾನಪದ ಸೇವಾ ರತ್ನ” ಹಾಗೂ “ರಾಜ್ಯ ಜಾನಪದ ಯುವ ಕಲಾರತ್ನ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರಿನ ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ಅಂಶಿ ಪ್ರಸನ್ನಕುಮಾರ್ ನೆರವೇರಿಸಿದರು. ಕರ್ನಾಟಕ ರಾಜ್ಯ ವೈಚಾರಿಕ ಚಿಂತಕರ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀ ಕ್ಯಾತನಹಳ್ಳಿ ಪ್ರಕಾಶ್ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಹಾರಾಜ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ವಾಸುದೇವ್ ಟಿ. ಅವರು ವಹಿಸಿದ್ದರು. ಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜು. ಬಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಸಹ ಪ್ರಾಧ್ಯಾಪಕರಾದ ಶ್ರೀ ಜಿ ಡಿ ಶಿವರಾಜ್ ಅವರು ಸಭೆಗೆ ವಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಶ್ರೀಮತಿ ಶಿವಮ್ಮ, ಶ್ರೀಮತಿ ಮಂಚಮ್ಮ, ಶ್ರೀ ಕಂಸಾಳೆ ಮಹದೇವ, ಡಾ. ಬೇಸೂರು ಮೋಹನ್ ಪಾಳೇಗಾರ್, ಡಾ. ರವಿಶಂಕರ್, ಶ್ರೀ ಸುರೇಶ್ ನಾಗ, ಶ್ರೀಮತಿ ಪನ್ನಗ ವಿಜಯಕುಮಾರ್, ಶ್ರೀಮತಿ ತನುಜಾ ಅಶೋಕ್, ಶ್ರೀಮತಿ ಗೀತಾ ಶ್ರೀಧರ್ ಹಾಗೂ ಡಾ. ಕಾವೇರಿ ಪ್ರಕಾಶ್ ಅವರಿಗೆ ರಾಜ್ಯ ಜಾನಪದ ಸೇವಾ ಪ್ರಶಸ್ತಿಯನ್ನು ವಿತರಿಸಲಾಯಿತು.
ರಾಷ್ಟ್ರಮಟ್ಟದಲ್ಲಿ ನಡೆದ 20 25 ರ ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಂಡ್ಯದ ಕೆ.ವಿ. ಶಂಕರಗೌಡ ಸ್ಮಾರಕ ಯುವಜನ ಸಂಘ ಕೀಲಾರದ ತಂಡದ ನಾಯಕ ಶ್ರೀ ಮಹೇಶ್ ಕೆ ಎಸ್, ಶ್ರೀ ಶಶಾಂಕ್ ಕೆ ಎನ್ ಶ್ರೀ ರಶಿ ಪ್ರಕಾಶ್ ಕೆ ಏನ್ ಶ್ರೀ ಮಂಜುನಾಥ ಕೆ ಎಸ್ ಶ್ರೀ ಗೌತಮ್ ಜಿ ಬಿ ಶ್ರೀ ಯಶವಂತ್ ಕೆ ಎಸ್ ಶಿವರುದ್ರ ಕೆಎನ್ ಶ್ರೀ ಚರಣ್ ಇವರಿಗೆ ರಾಜ್ಯ ಜಾನಪದ ಯುವ ಕಲಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಜಾನಪದ ಕಲಾವಿದರು ಜಾನಪದ ಗೀತೆಗಳ ಮೂಲಕ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು.